ಅವಲೋಕನ
ಮಾಡೆಲ್‌ನ ಕಾರ್ಯಕ್ಷಮತೆಯನ್ನು ಸುಧಾರಿಸಲು ಅರ್ಹ ವಿಷಯವನ್ನು ಬಳಸಬಹುದೇ ಎಂಬುದನ್ನು ನಿಯಂತ್ರಿಸಲು ನೆರವಾಗುವ ಸೆಟ್ಟಿಂಗ್‌ಗಳನ್ನು OpenAI ಒದಗಿಸುತ್ತದೆ.
ಈ ಸೆಟ್ಟಿಂಗ್‌ಗಳನ್ನು ಸಕ್ರಿಯಗೊಳಿಸಿದಾಗ, OpenAI ತನ್ನ ಮಾಡೆಲ್‌ಗಳ ಕಾರ್ಯಕ್ಷಮತೆ ಮತ್ತು ಸುರಕ್ಷತೆಯನ್ನು ಸುಧಾರಿಸಲು ಅರ್ಹ ವಿಷಯವನ್ನು ಬಳಸಬಹುದು. ಹೊಸ ಸಂಭಾಷಣೆಗಳು ಮತ್ತು ಕಾರ್ಯಗಳನ್ನು ಸೇರಿಸಬೇಕೇ ಎಂಬುದನ್ನು ನೀವು ನಿಯಂತ್ರಿಸಬಹುದು.
ನಮ್ಮ ಮಾಡೆಲ್‌ಗಳನ್ನು ಸುಧಾರಿಸಲು ಬಳಕೆದಾರರ ಅರ್ಹ ವಿಷಯವನ್ನು ಬಳಸುವ ಮೊದಲು, ತರಬೇತಿಯ ದತ್ತಾಂಶ ಸಮೂಹಗಳಲ್ಲಿರುವ ವೈಯಕ್ತಿಕ ಮಾಹಿತಿಯ ಪ್ರಮಾಣವನ್ನು ಕಡಿಮೆ ಮಾಡಲು ನಾವು ಕ್ರಮಗಳನ್ನು ಕೈಗೊಳ್ಳುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಗ್ರಾಹಕರ ಗೌಪ್ಯತೆ ನೋಡಿ.
ನಾವು ದತ್ತಾಂಶವನ್ನು ಹೇಗೆ ನಿರ್ವಹಿಸುತ್ತೇವೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ, ನಮ್ಮ ಪ್ರೈವಸಿ ಪಾಲಿಸಿ, ಟರ್ಮ್ಸ್ ಆಫ್ ಯೂಸ್ ಮತ್ತು ಉದ್ಯಮಗಳ ಗೌಪ್ಯತೆಯ ಪುಟ ನೋಡಿ.
ವ್ಯಕ್ತಿಗಳಿಗಾಗಿ ಸೇವೆಗಳು
ನೀವು ChatGPT ಮತ್ತು Codex ನಂತಹ ವ್ಯಕ್ತಿಗಳಿಗಾಗಿ ಇರುವ ನಮ್ಮ ಸೇವೆಗಳನ್ನು ಬಳಸುವಾಗ, ನಮ್ಮ ಮಾಡೆಲ್‌ಗಳಿಗೆ ತರಬೇತಿ ನೀಡಲು ನಿಮ್ಮ ವಿಷಯವನ್ನು ನಾವು ಬಳಸಬಹುದು. ನಿಮ್ಮ ಸಂಭಾಷಣೆಗಳನ್ನು ನಮ್ಮ ಮಾಡೆಲ್‌ಗಳ ಸುಧಾರಣೆಗೆ ಬಳಸಬೇಕೇ ಎಂಬುದನ್ನು ನೀವು ಆಯ್ಕೆ ಮಾಡಬಹುದು. ಹೊರಗುಳಿಯಲು, ChatGPT ಯಲ್ಲಿ ಸೆಟ್ಟಿಂಗ್‌ಗಳು > ದತ್ತಾಂಶ ನಿಯಂತ್ರಣಗಳು ಅಡಿಯಲ್ಲಿರುವ ಎಲ್ಲರಿಗಾಗಿ ಮಾಡೆಲ್ ಅನ್ನು ಸುಧಾರಿಸಿ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿ ಅಥವಾ ನಮ್ಮ ಪ್ರೈವಸಿ ಪೋರ್ಟಲ್‌ನಲ್ಲಿ ನನ್ನ ವಿಷಯವನ್ನು ತರಬೇತಿಗೆ ಬಳಸಬೇಡಿ ಎಂಬುದನ್ನು ಆಯ್ಕೆ ಮಾಡಿ.
ChatGPT ಸಂಭಾಷಣೆಗಳು ಮತ್ತು Codex ಕಾರ್ಯಗಳಿಗೆ ಈ ಎರಡರಲ್ಲಿ ಯಾವುದಾದರೂ ಒಂದು ಆಯ್ಕೆ ಸಾಕಾಗುತ್ತದೆ. ನೀವು ಎರಡನ್ನೂ ಮಾಡಬೇಕಾಗಿಲ್ಲ. ನೀವು ಹೊರಗುಳಿಯಲು ಆಯ್ಕೆ ಮಾಡಿದ ನಂತರ, ನಮ್ಮ ಮಾಡೆಲ್‌ಗಳನ್ನು ಸುಧಾರಿಸಲು ನಿಮ್ಮ ಹೊಸ ಸಂಭಾಷಣೆಗಳನ್ನು ನಾವು ಬಳಸುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ, ChatGPT ಯಲ್ಲಿ ದತ್ತಾಂಶ ನಿಯಂತ್ರಣಗಳು ನೋಡಿ.
ತರಬೇತಿಗೆ ನಿಮ್ಮ ವಿಷಯವನ್ನು ಬಳಸದಂತೆ ನೀವು ಆಯ್ಕೆ ಮಾಡಿದ್ದರೂ, ನಮ್ಮ ಉತ್ಪನ್ನಗಳೊಂದಿಗಿನ ನಿಮ್ಮ ಸಂವಹನಗಳ ಕುರಿತು ನಮಗೆ ಪ್ರತಿಕ್ರಿಯೆ ನೀಡಲು ನೀವು ಆಯ್ಕೆ ಮಾಡಬಹುದು (ಉದಾಹರಣೆಗೆ, ಮಾಡೆಲ್‌ನ ಉತ್ತರಕ್ಕೆ ಮೆಚ್ಚುಗೆ ಅಥವಾ ಅಸಮ್ಮತಿಯ ಚಿಹ್ನೆಯನ್ನು ಆಯ್ಕೆ ಮಾಡುವ ಮೂಲಕ). ನೀವು ಪ್ರತಿಕ್ರಿಯೆ ನೀಡಲು ಆಯ್ಕೆ ಮಾಡಿದರೆ, ಆ ಪ್ರತಿಕ್ರಿಯೆಗೆ ಸಂಬಂಧಿಸಿದ ಸಂಪೂರ್ಣ ಸಂಭಾಷಣೆಯನ್ನು ನಮ್ಮ ಮಾಡೆಲ್‌ಗಳಿಗೆ ತರಬೇತಿ ನೀಡಲು ಬಳಸಬಹುದು.
OpenAI ಬೆಂಬಲ ತಂಡದೊಂದಿಗಿನ ಸಂಭಾಷಣೆಗಳು
ಸೆಟ್ಟಿಂಗ್‌ಗಳಲ್ಲಿ ಎಲ್ಲರಿಗಾಗಿ ಮಾಡೆಲ್ ಅನ್ನು ಸುಧಾರಿಸಿ ಆಯ್ಕೆಯನ್ನು ಸಕ್ರಿಯಗೊಳಿಸಿದ್ದರೆ, OpenAI ಬೆಂಬಲ ತಂಡದೊಂದಿಗಿನ ಸಂಭಾಷಣೆಗಳನ್ನು ನಮ್ಮ ಮಾಡೆಲ್‌ಗಳು ಸೇರಿದಂತೆ OpenAI ಸೇವೆಗಳನ್ನು ಸುಧಾರಿಸಲು ಬಳಸಬಹುದು.
Codex
ಸಂಪೂರ್ಣ ಪರಿಸರಗಳನ್ನು ತರಬೇತಿಗೆ ಬಳಸಲು ಅನುಮತಿಸುವುದಕ್ಕಾಗಿ, Codex ಸೆಟ್ಟಿಂಗ್‌ಗಳಲ್ಲಿ ಪರಿಸರಗಳನ್ನು ಸೇರಿಸಿ ಎಂಬ ಪ್ರತ್ಯೇಕ ಸೆಟ್ಟಿಂಗ್ ಇದೆ. ChatGPT ಅಥವಾ ಪ್ರೈವಸಿ ಪೋರ್ಟಲ್‌ನಲ್ಲಿ ನಿಮ್ಮ ಸೆಟ್ಟಿಂಗ್‌ಗಳನ್ನು ಬದಲಾಯಿಸಿದರೆ ಆ ಸೆಟ್ಟಿಂಗ್ ಬದಲಾಗುವುದಿಲ್ಲ.
ತಾತ್ಕಾಲಿಕ ಚಾಟ್‌ಗಳು
ನೀವು ವೈಯಕ್ತೀಕರಣವನ್ನು ಆಯ್ಕೆ ಮಾಡಿದರೂ, ತಾತ್ಕಾಲಿಕ ಚಾಟ್‌ಗಳು ತಾತ್ಕಾಲಿಕವಾಗಿರುವವರೆಗೆ ಅವುಗಳನ್ನು OpenAI ಮಾಡೆಲ್‌ಗಳನ್ನು ಸುಧಾರಿಸಲು ಬಳಸಲಾಗುವುದಿಲ್ಲ. ಅವು ನಿಮ್ಮ ಚಾಟ್ ಇತಿಹಾಸದಲ್ಲಿ ಕಾಣಿಸುವುದಿಲ್ಲ ಮತ್ತು ನೆನಪುಗಳನ್ನು ರಚಿಸುವುದಿಲ್ಲ ಅಥವಾ ನವೀಕರಿಸುವುದಿಲ್ಲ.
ನೀವು ತಾತ್ಕಾಲಿಕ ಚಾಟ್ ಅನ್ನು ಉಳಿಸಿದರೆ, ಅದು ಸಾಮಾನ್ಯ ಚಾಟ್ ಆಗುತ್ತದೆ ಮತ್ತು ನಿಮ್ಮ ಖಾತೆಯ ವೈಯಕ್ತೀಕರಣ ಹಾಗೂ ಮಾಡೆಲ್ ಸುಧಾರಣೆಯ ಸೆಟ್ಟಿಂಗ್‌ಗಳಿಗೆ ಒಳಪಡುತ್ತದೆ.
ತಾತ್ಕಾಲಿಕ ಚಾಟ್ ಕುರಿತು ಹೆಚ್ಚಿನ ಮಾಹಿತಿಗಾಗಿ, ChatGPT ಯಲ್ಲಿ ತಾತ್ಕಾಲಿಕ ಚಾಟ್ ನೋಡಿ.
ಪೇರೆಂಟಲ್ ಕಂಟ್ರೋಲ್ಸ್
ಲಿಂಕ್ ಮಾಡಲಾದ ಹದಿಹರೆಯದವರ ಖಾತೆಯ ಸಂಭಾಷಣೆಗಳನ್ನು ನಮ್ಮ ಮಾಡೆಲ್‌ಗಳನ್ನು ಸುಧಾರಿಸಲು ಬಳಸಬಹುದೇ ಎಂಬುದನ್ನು ಪೋಷಕರು ಅಥವಾ ಪಾಲಕರು ಪೇರೆಂಟಲ್ ಕಂಟ್ರೋಲ್ಸ್ ಮೂಲಕ ನಿಯಂತ್ರಿಸಬಹುದು.
ವ್ಯವಹಾರ ಸೇವೆಗಳು ಮತ್ತು ನಿರ್ವಹಣೆಯಲ್ಲಿರುವ ಕಾರ್ಯಸ್ಥಳಗಳು
ಪೂರ್ವನಿಯೋಜಿತವಾಗಿ, ChatGPT Business, ChatGPT Enterprise, ChatGPT Edu ಅಥವಾ ನಮ್ಮ ಎಪಿಐಗೆ ನೀಡುವ ಮಾಹಿತಿಯನ್ನಾಗಲಿ, ಅವುಗಳಿಂದ ಬರುವ ಫಲಿತಾಂಶಗಳನ್ನಾಗಲಿ ನಮ್ಮ ಮಾಡೆಲ್‌ಗಳನ್ನು ಸುಧಾರಿಸಲು ನಾವು ಬಳಸುವುದಿಲ್ಲ. ಶೈಕ್ಷಣಿಕ ಸಂಶೋಧಕರಿಗಾಗಿ ಇರುವ ChatGPT ಕಾರ್ಯಸ್ಥಳಗಳಲ್ಲಿನ ವಿಷಯಕ್ಕೂ ಇದೇ ಅನ್ವಯಿಸುತ್ತದೆ.
ಎಪಿಐ ಸಂಸ್ಥೆಗಳ ಮಾಲೀಕರು ದತ್ತಾಂಶ ಹಂಚಿಕೆಯನ್ನು ಸಕ್ರಿಯಗೊಳಿಸಬಹುದು. ಅವರು ಹಾಗೆ ಮಾಡಿದಾಗ, OpenAI ಮಾಡೆಲ್‌ಗಳ ಸುಧಾರಣೆಗೆ ನೆರವಾಗಲು ಸದಸ್ಯರು ಪ್ರತಿಕ್ರಿಯೆ ಮತ್ತು ಪ್ರಸ್ತುತ ಎಪಿಐ Playground ಚಾಟ್ ಅನ್ನು ಹಂಚಿಕೊಳ್ಳಲು ಆಯ್ಕೆ ಮಾಡಬಹುದು.
ನಾವು ವ್ಯವಹಾರ ದತ್ತಾಂಶವನ್ನು ಹೇಗೆ ನಿರ್ವಹಿಸುತ್ತೇವೆ ಎಂಬುದರ ಕುರಿತು ಮಾಹಿತಿಗಾಗಿ, ಉದ್ಯಮಗಳ ಗೌಪ್ಯತೆ ನೋಡಿ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ಹೊರಗುಳಿಯಲು ಆಯ್ಕೆ ಮಾಡಿದ ನಂತರ ನಾನು ಪ್ರತಿಕ್ರಿಯೆ ಸಲ್ಲಿಸಿದರೆ ಏನಾಗುತ್ತದೆ.
ಉತ್ತರಕ್ಕೆ ಮೆಚ್ಚುಗೆ ಅಥವಾ ಅಸಮ್ಮತಿಯ ಚಿಹ್ನೆಯನ್ನು ಆಯ್ಕೆ ಮಾಡುವಂತಹ ರೀತಿಯಲ್ಲಿ ನೀವು ಸ್ವಯಂಪ್ರೇರಿತರಾಗಿ ಪ್ರತಿಕ್ರಿಯೆ ಸಲ್ಲಿಸಿದರೆ, ನೀವು ಹೊರಗುಳಿಯಲು ಆಯ್ಕೆ ಮಾಡಿದ್ದರೂ ಆ ಪ್ರತಿಕ್ರಿಯೆಗೆ ಸಂಬಂಧಿಸಿದ ಸಂಪೂರ್ಣ ಸಂಭಾಷಣೆಯನ್ನು ನಮ್ಮ ಮಾಡೆಲ್‌ಗಳನ್ನು ಸುಧಾರಿಸಲು ಬಳಸಬಹುದು.
